7 May

ಜ್ಯೋತಿ ಆಸ್ಪತ್ರೆ, ಲೈಲಾ – ತುರ್ತು ಮತ್ತು ಅಪಘಾತ ಚಿಕಿತ್ಸಾ  ಘಟಕ ಉದ್ಘಾಟನೆ

ಜ್ಯೋತಿ ಆಸ್ಪತ್ರೆ, ಲೈಲಾ – ತುರ್ತು ಮತ್ತು ಅಪಘಾತ ಚಿಕಿತ್ಸಾ  ಘಟಕ ಉದ್ಘಾಟನೆ

ಜ್ಯೋತಿ ಆಸ್ಪತ್ರೆ, ಲೈಲಾ ಮತ್ತು ಕೆಎಂಸಿ ಆಸ್ಪತ್ರೆ, ಮಂಗಳೂರು ಇದರ ಸಹಯೋಗದೊಂದಿಗೆ, ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕವನ್ನು 2025ರ ಏಪ್ರಿಲ್ 7ರಂದು ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದಲ್ಲಿ ಖ್ಯಾತ ಗಣ್ಯರು ಉಪಸ್ಥಿತರಿರಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬೆಲ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಮಾರ್ ಲಾರೆನ್ಸ್ ಮುಕ್ಕುಯಿ , ಶಾಸಕರಾದ ಶ್ರೀ ಹರೀಶ್ ಪೂಂಜ, ತಾಲೂಕು ಆರೋಗ್ಯಾಧಿಕಾರಿ ಡಾ. ಸಂಜಾತ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಸ್ಥಾಪಕರಾದ ಶ್ರೀ ರಕ್ಷಿತ್ ಶಿವರಾಮ್, ಕೆಎಂಸಿ ಆಸ್ಪತ್ರೆ ಮಂಗಳೂರಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಾಗೀರ್ ಸಿದ್ಧಿಕಿ, ಡಾ. ಜೀದು ರಾಧಾಕೃಷ್ಣನ್, ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯ ಅಧಿಕಾರಿ ಶ್ರೀಮತಿ ಪ್ರಿಯಾ ಚಾಕೋ ಮತ್ತಿತರರು ಭಾಗವಹಿಸಲಿದ್ದಾರೆ.


ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕವು 2025ರ ಏಪ್ರಿಲ್ 17ರಿಂದ ಪ್ರಾಯೋಗಿಕ ಕಾರ್ಯಾಚರಣೆ ಆರಂಭಿಸಲಾಗಿದೆ. ಈ ಕೇಂದ್ರವು 24 ಗಂಟೆಗಳ ತುರ್ತು ಮತ್ತು ಅಪಘಾತ ಚಿಕಿತ್ಸಾ ಆರೈಕೆ ಘಟಕವಾಗಿದ್ದು, ವಾರದ ಎಲ್ಲ ದಿನಗಳಲ್ಲಿಯೂ ಕಾರ್ಯನಿರ್ವಹಿಸಲಿದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಪರಿಣತಿಯುಳ್ಳ ವೈದ್ಯರು ಇಲ್ಲಿ ಸೇವೆ ಸಲ್ಲಿಸಲಿದ್ದು, ಐದು ಹಾಸಿಗೆಗಳೊಂದಿಗೆ ಆಧುನಿಕ ಸೌಲಭ್ಯಗಳನ್ನು ಹೊಂದಿರುತ್ತದೆ. ಜೊತೆಗೆ, ವೈದ್ಯಕೀಯ ತಂಡದೊಂದಿಗಿನ ICU ಆಂಬ್ಯುಲೆನ್ಸ್ ಸೇವೆಯೂ ಲಭ್ಯವಿರುತ್ತದೆ.


"ರೋಗಿಯ ಜೀವ ಉಳಿವು ಹಲವು ಬಾರಿ ‘ಗೋಲ್ಡನ್ ಅವರ್’ ಎಂದು ಕರೆಯಲಾಗುವ ಪ್ರಥಮ ಗಂಟೆಯಲ್ಲಿನ ಚಿಕಿತ್ಸೆಯ ಮೇಲೆ ಆಧಾರಿತವಾಗಿರುತ್ತದೆ. ಬೆಲ್ತಂಗಡಿ ಪ್ರದೇಶದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆಯಿಂದ ಅನೇಕ ಜೀವಹಾನಿ ಸಂಭವಿಸುತ್ತಿದೆ. ಇಂತಹ ತುರ್ತು ಸಂದರ್ಭಗಳಲ್ಲಿ ಜನರ ಅಗತ್ಯತೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಉದ್ದೇಶದೊಂದಿಗೆ ಈ ಘಟಕವನ್ನು ಪ್ರಾರಂಬಿಸಲಾಗುತ್ತಿದೆ " ಎಂದು ಜ್ಯೋತಿ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಸಿಸ್ಟೆರ್ ಮೆರಿಟ್ ಹೇಳಿದರು.